ಅನ್ಯಾತಿಯನ್
 	
ಬರ್ಮದ ಇರವಾಡಿ ನದೀಕಣಿವೆಯಲ್ಲಿನ ಶಿಲಾಯುಗದ ಜನರ ಸಂಸ್ಕøತಿ, ಮಧ್ಯ ಪ್ಲೀಸ್ಟೋಸೀನ್‍ಯುಗದ ಆರಂಭದಲ್ಲಿ ಹುಟ್ಟಿರಬಹುದಾದ ಈ ಜೀವನಕ್ರಮ ಯುಗದ ಕೊನೆಯವರೆಗೂ ಅಥವಾ ಇನ್ನೂ ಈಚಿನವರೆಗೂ ಮುಂದುವರಿಯಿತು (ಸು.ಕ್ರಿ.ಪೂ 300,000 ದಿಂದ ಕ್ರಿ.ಪೂ. 12,000 ವರ್ಷದವರೆಗೆ). ಹೆರೆಯುವ, ಕೊಚ್ಚುವ ಸಾಧನಗಳು ಮತ್ತು ವಿಶೇಷ ತರಹದ ಕೈಬಾಚಿಗಳು ಈ ಕಾಲದ ಸಾಮಾನ್ಯ ಶಿಲಾಯುಧಗಳು. ಇವೆಲ್ಲ ಒಂದು ರೀತಿಯ ವೃಕ್ಷಶಿಲೆಗಳಿಂದ (ಫಾಸ್ಸಿಲ್‍ವುಡ್) ಮಾಡಿದವು. ಈ ಸಂಸ್ಕøತಿ ಆಗ್ನೇಯ ಏಷ್ಯ ಚೀನ ಮತ್ತು ಉತ್ತರ ಪಂಜಾಬ್‍ಗಳನ್ನು ಒಳಗೊಂಡ ವಿಶಾಲಪ್ರದೇಶದಲ್ಲಿದ್ದ ಸಮಕಾಲೀನ ಸಂಸ್ಕøತಿಯ ಕೂಟಕ್ಕೆ ಸೇರಿದ್ದಾಗಿದೆ.  											
 (ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ